ಭಟ್ಕಳ ತಾಲೂಕ ವಕೀಲರ ಸಂಘದ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಈಶ್ವರ ಎಂ. ನಾಯ್ಕ ಆಯ್ಕೆ

ಭಟ್ಕಳ: ಭಟ್ಕಳ ತಾಲೂಕ ವಕೀಲರ ಸಂಘದ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಈಶ್ವರ ಎಂ. ನಾಯ್ಕ, ಕಾರ್ಯದರ್ಶಿಯಾಗಿ ನಾಗೇಶ ಗದ್ದೆಮನೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಚುನಾವಣಾಧಿಕಾರಿಯಾಗಿ ಹಿರಿಯ ವಕೀಲ ಎಂ.ಎಲ್. ನಾಯ್ಕ ಕರ್ತವ್ಯ ನಿರ್ವಹಿಸಿದರು. ಚುನಾವಣೆಯ ಸಭೆಯ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಎಂ.ಜೆ. ನಾಯ್ಕ ವಹಿಸಿದ್ದರು. ಸಂಘದ ಉಪಾಧ್ಯಕ್ಷರಾಗಿ ಆರ್.ಜಿ.ನಾಯ್ಕ, ಜಂಟಿ ಕಾರ್ಯದರ್ಶಿಯಾಗಿ ಶ್ರಾವ್ಯ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರ ಆಯ್ಕೆಗೆ ರಾಜೇಶ ನಾಯ್ಕ ಸೂಚಿಸಿದರು. ನಾಗರಾಜ ಈ.ಎಚ್. ಅನುಮೋದಿಸಿದರು. ಉಪಾಧ್ಯಕ್ಷರ ಆಯ್ಕೆಗೆ ವಿ.ಎ. ಅಕ್ಕಿವಳ್ಳಿ ಸೂಚಿಸಿದರು. ಎಸ್.ಕೆ. ನಾಯ್ಕ ಅನುಮೋದಿಸಿದರು. ಕಾರ್ಯದರ್ಶಿ ಆಯ್ಕೆಗೆ ಎಸ್.ಬಿ. ಬೊಮ್ಮಾಯಿ ಸೂಚಿಸಿದರು. ವಿ.ಎ. ಅಕ್ಕಿವಳ್ಳಿ ಅನುಮೋದಿಸಿದರು. ಜಂಟಿ ಕಾರ್ಯದರ್ಶಿ ಆಯ್ಕೆಗೆ ಎಂ.ಎಚ್. ನಾಯ್ಕ ಸೂಚಿಸಿದರು. ವಿ.ಜೆ. ನಾಯ್ಕ ಅನುಮೋದಿಸಿದರು. ಆಯ್ಕೆ ಸಭೆಯಲ್ಲಿ ಆಯ್ಕೆ ಸಭೆಯಲ್ಲಿ ವಕೀಲರುಗಳಾದ ನಾಗರಾಜ ಈ.ಎಚ್., ಎಸ್.ಎಂ.ನಾಯ್ಕ, ವಿ.ಎಫ್.ಗೋಮ್ಸ, ಕೆ.ಎಚ್. ನಾಯ್ಕ, ಸಿ.ಎಂ. ಭಟ್ಟ, ಮಹೇಶ ನಾಯ್ಕ, ರಕ್ಷಿತ್ ಆರ್. ಶ್ರೇಷ್ಠಿ ಮುಂತಾದವರು ಸೇರಿದಂತೆ ಹಿರಿಯ, ಕಿರಿಯ ವಕೀಲರುಗಳು ಉಪಸ್ಥಿತರಿದ್ದರು.ಭಟ್ಕಳ ತಾಲೂಕ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಈಶ್ವರ್ ನಾಯ್ಕ ಮತ್ತು ಉಪಾಧ್ಯಕ್ಷ ರಾಗಿ ಆಯ್ಕೆಯಾದ ಆರ.ಜಿ.ನಾಯ್ಕ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಕರಾವಳಿ ಕರ್ನಾಟಕ ವಿಭಾಗದ ಅಧ್ಯಕ್ಷ ಕುಮಾರ್.ನಾಯ್ಕ ಭಟ್ಕಳ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ

Leave a Reply

Your email address will not be published. Required fields are marked *


Next Post

چبٹا شربت یا دیوہیکل خربوزہ شربت

ڈاکٹر محمد فاروق شاہ بندری / المعروف نقاش نائطی/ ابن بھٹکلی کراولی نیوز نیٹ ورک بھٹکل 25 اکتوبر 2025 بروزسنیچر بھٹکلی کھان پان میں، ایک اچھوتا نام، چبٹا شربت ، قدرتی پھل فروٹ کو زمانہ قدیم سے، لوگ نت نئے اندازا کھاتے پیتے آئے ہیں۔ مختلف اقوام یا ذات برادری […]

You May Like